ದಸರಾ ಹಬ್ಬದಲ್ಲಿ ಹುಚ್ಚುಹುಡುಗ್ರು ಧ
Send us your feedback to audioarticles@vaarta.com
ನಾಡ ಹಬ್ಬ ದಸರಾ ಸಂದರ್ಭದಲ್ಲಿ ಹುಚ್ಚುಹುಡುಗ್ರು ಸಿನೆಮಕ್ಕೆ ಒಂದು ಅವಕಾಶ ಒದಗಿ ಬಂದಿದೆ. ಯುವ ದಸರಾ ಉತ್ಸವವೂ ಮೈಸೂರಿನಲ್ಲಿ ಜರಗುವುದರಿಂದ ಅಕ್ಟೋಬರ್ 7ನೇ ದಿವಸ ಈ ಸಿನೆಮಾದ ಧ್ವನಿ ಸುರುಳಿ ಬಿಡುಗಡೆ ಜೊತೆಗೆ ಸಿನೆಮಾದ ಪಬ್ಲಿಸಿಟೀ ಕೆಲಸವೂ ಪ್ರಾರಂಭವಾಗಲಿದೆ. ಅಂದು ಈ ಚಿತ್ರ ತಂಡ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಹಸ್ರಾರು ನೋಡುಗರನ್ನು ಆಕರ್ಷಿಸಲಿದೆ. ಯುವ ತಂಡ ಹುಚ್ಚುಹುಡುಗ್ರುಸಿನೆಮಾ ಮಾಡುತ್ತಿರುವದರಿಂದ ಯುವ ದಸರಾ ಉತ್ಸವದಲ್ಲಿ ಮನರಂಜನೆಯ ಹೊಳೆ ಹರೆಯುವುದು ಗ್ಯಾರಂಟಿ.
'ಹುಚ್ಚ್ ಹುಡುಗ್ರು' ತಂಡ ಯೋಜನೆಯಂತೆ ಮಾತಿನ ಬಾಗದ ಚಿತ್ರೀಕರಣ ಮುಗಿಸಿದೆ., 'ಭಗವತಿ ಪಿಚ್ಚೆರ್ಸ್' ಅಡಿಯ ಈ ಚಿತ್ರದಲ್ಲಿ ನಾಲ್ಕುನಾಯಕರುಗಳಿಗೆ ಶಿವನ ಪರ್ಯಾಯ ಹೆಸರುಗಳನ್ನು ಇಟ್ಟಿರುವುದರ ಜೊತೆಗೆ ಚಿತ್ರೀಕರಣ ಸಹ ಮೈಸೂರು ನಂಜನಗೂಡಿನ ಸುತ್ತ ಮುತ್ತ ಮಾಡಲಾಗಿದೆ.
ವೇದಮೂರ್ತಿ ಹಾಗೂ ರೋಹಿಣಿ ಅವರು ಚಿತ್ರದ ನಿರ್ಮಾಪಕರುಗಳು. ರೇಡಿಯೊ ಜಾಕೀ ಆರ್ ವಿ ಪ್ರದೀಪ್ ಈ ಹುಚ್ಚ್ ಹುಡುಗರುಮೂಲಕ ನಿರ್ದೇಶನಕ್ಕೆ ಹೆಜ್ಜೆ ಇಡುತ್ತಿದ್ದಾರೆ.ಯಂಗ್ ಹುಡುಗರು ಯಂಗ್ ಯೆಂಗೋ ಆಡುವುದು ಈ ಚಿತ್ರದ ತಮಾಷೆ ವಿಚಾರ.ನಿರ್ದೇಶಕ ಪ್ರೇಮ್ ಬಳಿ ಕರಿಯ ಸಿನೆಮದಿಂದ ರಾಜ್ ದಿ ಶೋಮನ್ ವರೆಗೆ ಸಹಾಯಕರಗಿ ದುಡಿದ ರಘು ಹಾಸನ್ ಅವರು ಚಿತ್ರದ ಕಥೆ ಚಿತ್ರಕಥೆ ನಿರ್ಮಾಣದ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ.ಗೀತೆಗಳ ಸಾಹಿತ್ಯ ಆನಂದಪ್ರಿಯ ಕಲ್ಯಾಣ್ ಹಾಗೂ ಸುದರ್ಶನ್ ಅವರುನೀಡುತ್ತಿದ್ದಾರೆ.ಸಂಭಾಷಣೆಯನ್ನು ಸುದರ್ಶನ್ ಛಾಯಾಗ್ರಹಣ ಮಿತೃ ಅವರು ಚಿತ್ರಕ್ಕೆ ಒದಗಿಸಿದ್ದಾರೆ.
'ಹುಚ್ಚ್ಹುಡುಗರು' ಚಿತ್ರದ ಶೀರ್ಷಿಕೆ ಗೀತೆ ನಿರ್ದೇಶಕ ಪ್ರೇಮ್ ಹೇಳಿದ್ದಾರೆ - 'ಹರಕಲು ಅಂಗಿ, ತ್ಯಾಪೆ ಚಡ್ಡಿ, ಕುರುಚಲು ಗಣ್ಣ, ಲೂಸುತಲೆ ಹುಚ್ಚ್ ಹುಡುಗರು...ಎಂಬುವ ಹಾಡನ್ನು ಸಂಗೀತ ನಿರ್ದೇಶಕ ಜೋಷುವ ಶ್ರೀಧರ್ ಧ್ವನಿ ಮುದ್ರಿಸಿ ಕೊಂಡಿದ್ದಾರೆ.ಚಿತ್ರದ ತ
Follow us on Google News and stay updated with the latest!
-
Contact at support@indiaglitz.com
Comments